ಅಹಮದ್  (1691-1695). ತುರ್ಕಿ ಸುಲ್ತಾನ್ ಎರಡನೆಯ ಸುಲೇಮಾನನ ತರುವಾಯ ಸುಲ್ತಾನನಾದ. ತುರ್ಕಿಗೆ ಸೇರಿದ್ದ ಕ್ರೈಸ್ತ ದೇಶಗಳನ್ನೆಲ್ಲ ಬಿಡುಗಡೆ ಮಾಡಬೇಕೆಂಬ ಉದ್ದೇಶದಿಂದ ಪೋಲೆಂಡ್ ಆಸ್ಟ್ರಿಯ ಮತ್ತು ವೆನಿಸ್ ರಾಜ್ಯಗಳು ಪವಿತ್ರಕೂಟವೊಂದನ್ನು ಮಾಡಿಕೊಂಡು ತುರ್ಕಿಯ ಮೇಲೆ ಯುದ್ಧ ನಡೆಸಿದವು. ಇವನ ಕಾಲದಲ್ಲಿ ಸ್ಲಾಂಕಮೆನ್ ಎಂಬಲ್ಲಿ ನಡೆದ ಕದನದಲ್ಲಿ ತುರ್ಕಿ ಸೈನ್ಯ ಭಾರಿ ಅಪಜಯ ಹೊಂದಿತು. ಸಮರ್ಥ ವಜೀರ್ ಮುಸ್ತಫ ಕೊಪ್ರೂಲ್ ಯುದ್ಧರಂಗದಲ್ಲಿ ಮಡಿದ. ಹಂಗೆರಿ ತುರ್ಕಿ ಸುಲ್ತಾನರ ಕೈಬಿಟ್ಟಿತು.												

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ